Date : 27 October 2026
Posted By : GARUDAREKHE

ರಾಷ್ಟ್ರಮಟ್ಟದ INSPIRE ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾದ ಹುಬ್ಬಳ್ಳಿಯ ವಿದ್ಯಾರ್ಥಿ ಶ್ರವಣ ಮಡಿವಾಳರಿಗೆ ಅಭಿನಂದನೆಗಳು

ರಾಷ್ಟ್ರಮಟ್ಟದ INSPIRE ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾದ ಹುಬ್ಬಳ್ಳಿಯ ವಿದ್ಯಾರ್ಥಿ ಶ್ರವಣ ಮಡಿವಾಳರಿಗೆ ಅಭಿನಂದನೆಗಳು

ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ INSPIRE ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿರುವ ಹುಬ್ಬಳ್ಳಿಯ ಸೋನಿಯಾಗಾಂಧಿನಗರದ ವಾರ್ಡ್‌ ನಂ. 82ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಕು. ಶ್ರವಣ ರಮೇಶ ಮಡಿವಾಳರ ಅವರನ್ನು ಅಭಿನಂದಿಸಿ, ಅವರ ಸಾಧನೆಗೆ ಶುಭ ಹಾರೈಸಲಾಯಿತು.

ಪೂರ್ವ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ವೇದಿಕೆಯಲ್ಲಿ ಭಾಗವಹಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಶ್ರವಣ ಅವರಲ್ಲಿರುವ ನಾವೀನ್ಯತೆಯ ಚಿಂತನೆ, ಪ್ರತಿಭೆ ಹಾಗೂ ಕ್ರೀಡಾ ಆಸಕ್ತಿ ಮತ್ತಷ್ಟು ಬೆಳೆಯಲಿ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ, ರಾಜ್ಯದ ಹಾಗೂ ಹುಬ್ಬಳ್ಳಿ-ಧಾರವಾಡದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆ.